ನನ್ನ ಕವನಗಳು

ಶ್ರಾವಣದ ಪ್ರೇಮಿಗಳು - ನೆಲದ ಋಣ

ನೆಲದ ಋಣವು ಇರುವ ತನಕ ಬದುಕಬೇಕು  ಜಲದ ರುಚಿಯ  ಅಳೆಯದಂತೆ ಕುಡಿಯಬೇಕು  ಗಂಗೆ ತಾನು ಪವಿತ್ರೆಯೆಂದು  ನಾವು ತಿಳಿದಿರಬೇಕು  ಭೂಮಿ ತಾಯಿಗೆ ನಾವು  ಅತಿಥಿಗಳೆಂಬುದನ್ನು ಅರಿಯಬೇಕು. ನೆಲದ ಋಣವು............ ಜೀವರಸವ ತುಂಬಿಕಳಿಸಿಹ  ಯಾತ್ರೆಗಾಗಿ ಎಂದು  ತನುವು ಮನವು ಧನವು ಕೂಡ  ಅವನದೇ ಎಂದು  ತಿಳಿಯ ಹೊರಟ ಮನಸಿನಾಳ  ಬಹಳ ಹಗುರವೆಂದು  ಮರೆಯದಂತೆ ನಾವು ಬಂದ  ಕೆಲಸವನ್ನು ಮುಗಿಸಬೇಕೆಂದು. ನೆಲದ ಋಣವು............... ಗಾಳಿ, ಬೆಳಕು, ನೀರನೆಲ್ಲ ನಮಗಾಗಿ ನೀಡಿರಲು  ಮರೆಯಬೇಕು ಕಷ್ಟಗಳನು  ಸುಖವು ಬಂದಿರಲು  ಪ್ರಕೃತಿಯ ಸೊಬಗನ್ನು  ಸವಿಯುತ್ತ ಕಳೆದಿರಲು  ಬದುಕಿಗೊಂದರ್ಥವಿರುವುದನ್ನು  ತಿಳಿಯುತಿರಲು. ನೆಲದ ಋಣವು................ ಭುವಿಯ ನಾಕ ಸಿಹಿಯ ಜೊತೆಗೆ  ಕಹಿಯ ನೀಡಿರಲು  ಹೆದರದಂತೆ ನಾಕ ನರಕಗಳನ್ನು  ಸಮನೆಂದು ಸ್ವೀಕರಿಸಿರಲು  ನೆಮ್ಮದಿಯ ಕ್ಷಣಗಳು  ಬದುಕಿನಲ್ಲಿ ತಾವಾಗೇ ಬರುತಿರಲು  ಅವಕಾಶಕ್ಕಾಗಿ ಕಾಯಬೇಕು  ನಮ್ಮ ಸರದಿ ಮುಂದಿರಲು. ನೆಲದ ಋಣವು............. ಬಾಳಿನ ಬೆಳಕಿಗಾಗಿ ಕೊಂಚ  ವಿರಮಿಸಲೇಬೇಕು  ಜೀವನವೊಂದು ಭಾಗ್ಯದೊಡಲೆಂದು  ಭಾವಿಸಲೇ ಬೇಕು. ಹಸುರಿನುಸಿರು ಬರುವುದೆಂಬ  ಕಾತರದ ನಿರೀಕ್ಷೆಯಲ್ಲಿರಬೇಕು  ಮುಕ್ತಿ ಮಾರ್ಗ...

ಶ್ರಾವಣದ ಪ್ರೇಮಿಗಳು - ಪ್ರೇಮದಾಳ


ಮನಸಿನಾಳಕೆ ಮತ್ತೆ ಮತ್ತೆ

ಮರಳಿ ಬರುತಿಹ ನೆನಪಿನಾಳ 

ಬಹುದಿನಗಳ ಅಂತರವನ್ನು 

ದೂರಮಾಡಿ ಒಂದಾದ ಅಂತರಾಳ 

ಉಸಿರಿನಲ್ಲಿ ಬೆರೆತು ಸ್ಪಂಧಿಸಿತೆ 

ಹೃದಯವಂತಿಕೆಯ ಒಡಲಾಳ 

ಬೆರಗುಗೊಳಿಸಿದೆಯೇನು 

ಮಿಂಚಿ ಮರೆಯಾದ ಪ್ರೇಮದಾಳ.

ಮನಸಿನಾಳಕೆ........

ಹೃದಯಕ್ಕದುವೆ ಮರೆಯಲಾರದ 

ನೋವಿನ ವಿರಹದ ತಾಪ 

ನಾ ಸಾಯಲೇನು ಬದುಕಲಾರದೆ 

ಮರೆಯಾಗಿ ನೀಡಿಹೆ ಶಾಪ 

ನಿಶ್ಯಬ್ದವಾಗಿಹುದು ನನ್ನ ನಾಲಿಗೆ 

ಮಾತನಾಡದೆ ತೋರುತಿದೆ ಕೋಪ 

ರಂಗೇರಿತೆ ಮತ್ತೊಮ್ಮೆ ಪ್ರೇಮಾಂಕುರಕೆ 

ಒಂದಾದ ಹೃದಯಗಳ ಪ್ರಕೋಪ.

ಮನಸಿನಾಳಕೆ........

ನೂರಾರು ಹೊಸ ಕಲ್ಪನೆಗಳು


ಮನದಲ್ಲಿ ಮೂಡಿಬಂದಿರಲು 

ನಿನ್ನ ಪ್ರೇಮದಾಸಾರೆಯು ನನ್ನೊಳಗೆ 

ಉಲ್ಲಾಸವನ್ನು ತಂದಿರಲು 

ಕಡಲಾಳವನ್ನು ಹೊಕ್ಕಿ ಬಂದ 

ಭಗ್ನ ಪ್ರೇಮಿಯು ನಾನಾಗಿರಲು 

ಕೂಡಿಬಾಳಲೇಬೇಕೆಂಬ ಆಸೆ 

ನನ್ನ ಹೃದಯದರಸಿ ನೀನಾಗಿರಲು.

ಮನಸಿನಾಳಕೆ.........

ಸ್ಫೂರ್ತಿಯ ಚಿಲುಮೆಯು 

ನನ್ನ ಬದುಕಿನಲ್ಲಿ ನೀನಾದೆ 

ಹೊಸ ವಸಗೆಯನ್ನು ಚೆಲ್ಲುತ್ತ 

ಬಂದವಳ ಬಾಳಲ್ಲಿ ನಾನಾದೆ 

ನೂರು ಜನುಮಗಳ ಇತಿಹಾಸವುಂಟು 

ಅದು ಎದೆಯಾಟದಲ್ಲಿದೆ 

ಬಯಸಿ ಪಡೆದ ನಮ್ಮ 

ಬದುಕಿನ ಪಯಣಕ್ಕೆ ಅಂತ್ಯವೆಲ್ಲಿದೆ.

ಮನಸಿನಾಳಕೆ.......

ನೆನಪುಗಳನ್ನೇ ನೆಮ್ಮದಿಯ 

ಮನಃಶಾಂತಿಗಾಗಿ ನೀ ತಂದೆ 

ಬಣ್ಣ ಬಣ್ಣದ ಪ್ರೀತಿಯನ್ನು 

ಎದೆಯಾಳದಿ ತುಂಬಿ ನೀ ನಿಂದೆ


ಜಗವೆಲ್ಲಾ ಎದುರಾದರೂ 

ನಾನಿರುವೆ ನಿನ್ನ ಪ್ರೇಮದ ಹಿಂದೆ 

ಹೃದಯಾಂತರಂಗವನ್ನು ಅರಿತು 

ಬೆರೆತು ಬದುಕೋಣ ಮುಂದೆ.

ಮನಸಿನಾಳಕೆ.........

ಮನಸಿನಾಳಕೆ ಇಳಿದುಬಂದೆ 

ಪ್ರೇಮಗಂಗೆಯಾಗಿ ಹಳೆಯ ನೆನಪುಗಳಿಂದ 

ಮರೆವೆನೇನು ಶಾಕುಂತಳೆಯಂದದಿ 

ನೀನಿಟ್ಟ ಆ ಪ್ರೇಮಾದರದಿಂದ 

ನಾ ಸೋತುಹೋದೆ, ಬರೆದೆನಲ್ಲ 

ಮಿಲನದಾಟವನ್ನು ಹೊಸ ಮುದದಿಂದ 

ನೆನಪಿನಲ್ಲಾದರೂ ಕನಸನ್ನು ತೋರಿಸಲು 

ಬಂದೆಯಾ ಗೆಳತಿ ಹಳೆಯ ಪ್ರೇಮದಿಂದ.

ಮನಸಿನಾಳಕೆ............

*************************************************************


ಕಾಮೆಂಟ್‌ಗಳು