ನನ್ನ ಕವನಗಳು

ಶ್ರಾವಣದ ಪ್ರೇಮಿಗಳು - ನೆಲದ ಋಣ

ನೆಲದ ಋಣವು ಇರುವ ತನಕ ಬದುಕಬೇಕು  ಜಲದ ರುಚಿಯ  ಅಳೆಯದಂತೆ ಕುಡಿಯಬೇಕು  ಗಂಗೆ ತಾನು ಪವಿತ್ರೆಯೆಂದು  ನಾವು ತಿಳಿದಿರಬೇಕು  ಭೂಮಿ ತಾಯಿಗೆ ನಾವು  ಅತಿಥಿಗಳೆಂಬುದನ್ನು ಅರಿಯಬೇಕು. ನೆಲದ ಋಣವು............ ಜೀವರಸವ ತುಂಬಿಕಳಿಸಿಹ  ಯಾತ್ರೆಗಾಗಿ ಎಂದು  ತನುವು ಮನವು ಧನವು ಕೂಡ  ಅವನದೇ ಎಂದು  ತಿಳಿಯ ಹೊರಟ ಮನಸಿನಾಳ  ಬಹಳ ಹಗುರವೆಂದು  ಮರೆಯದಂತೆ ನಾವು ಬಂದ  ಕೆಲಸವನ್ನು ಮುಗಿಸಬೇಕೆಂದು. ನೆಲದ ಋಣವು............... ಗಾಳಿ, ಬೆಳಕು, ನೀರನೆಲ್ಲ ನಮಗಾಗಿ ನೀಡಿರಲು  ಮರೆಯಬೇಕು ಕಷ್ಟಗಳನು  ಸುಖವು ಬಂದಿರಲು  ಪ್ರಕೃತಿಯ ಸೊಬಗನ್ನು  ಸವಿಯುತ್ತ ಕಳೆದಿರಲು  ಬದುಕಿಗೊಂದರ್ಥವಿರುವುದನ್ನು  ತಿಳಿಯುತಿರಲು. ನೆಲದ ಋಣವು................ ಭುವಿಯ ನಾಕ ಸಿಹಿಯ ಜೊತೆಗೆ  ಕಹಿಯ ನೀಡಿರಲು  ಹೆದರದಂತೆ ನಾಕ ನರಕಗಳನ್ನು  ಸಮನೆಂದು ಸ್ವೀಕರಿಸಿರಲು  ನೆಮ್ಮದಿಯ ಕ್ಷಣಗಳು  ಬದುಕಿನಲ್ಲಿ ತಾವಾಗೇ ಬರುತಿರಲು  ಅವಕಾಶಕ್ಕಾಗಿ ಕಾಯಬೇಕು  ನಮ್ಮ ಸರದಿ ಮುಂದಿರಲು. ನೆಲದ ಋಣವು............. ಬಾಳಿನ ಬೆಳಕಿಗಾಗಿ ಕೊಂಚ  ವಿರಮಿಸಲೇಬೇಕು  ಜೀವನವೊಂದು ಭಾಗ್ಯದೊಡಲೆಂದು  ಭಾವಿಸಲೇ ಬೇಕು. ಹಸುರಿನುಸಿರು ಬರುವುದೆಂಬ  ಕಾತರದ ನಿರೀಕ್ಷೆಯಲ್ಲಿರಬೇಕು  ಮುಕ್ತಿ ಮಾರ್ಗ...

ಶ್ರಾವಣದ ಪ್ರೇಮಿಗಳು


ಶ್ರಾವಣ ಮಾಸದ

ಶನಿವಾರದಂದು 

ಮನಸಿಗೆ ತಾಕಿದೆ 

ಅಂದಿನಿಂದಲೆ ಪ್ರತಿವಾರ 

ಉಪಾದಾನಕ್ಕೆ ಬಂದೆ 

ನಿನ್ನ ಮುಂದೆ 

ಅಕ್ಕಿಯ ಜೊತೆ 

ಪ್ರೇಮಭಿಕ್ಷೆಯನ್ನೂ ನೀಡಿ 

ನನ್ನನ್ನು ಸಂತೈಸಿದೆ 

ಮುಂದೆ, ಮನೆಯವರೆಲ್ಲರ 

ವಿರೋಧದ ನಡುವೆಯೂ 

ಬಾಳು ಬೆಳಗ ಬಂದೆ.

ಶ್ರಾವಣ ಮಾಸದ.........

ಜೀವನದಲ್ಲಿ 

ಭರವಸೆಯ ಬದುಕನ್ನು 

ಕಟ್ಟಿಕೊಟ್ಟೆ ನನಗೆ 

ಮರೆವೆನೇನು 

ಶ್ರಾವಣ ಮಾಸದಲ್ಲಿ 

ನೀ ನೀಡಿದ ಪ್ರೇಮದ ಸಿರಿನಗೆ 


ಹೃದಯವನ್ನು ಹೊಕ್ಕು 

ಹುಮ್ಮಸ್ಸು ಮೂಡಿಸಿದೆಯಲ್ಲ 

ಬೀರುತ್ತ ಹೂ ನಗೆ 

ಭಾಗ್ಯದ ಬಾಗಿಲನ್ನು ತೆರೆದು 

ಪ್ರೇಮದಾಶ್ರಯವನಿಟ್ಟೆ ನನಗೆ.

ಶ್ರಾವಣ ಮಾಸದ.............

ಮನಸ್ಸು ಮಾಡಿದ್ದರೆ 

ಸಿರಿವಂತರ ಮನೆಯ 

ಸೊಸೆಯಾಗಬಹುದಿತ್ತು ನೀನು 

ಮರುಳಾದೆಯೇನು 

ಮೋಹದ ಬಲೆಯಲ್ಲಿ ಸಿಲುಕಿ 

ಬಂದೆನೇನು ಬಾಳಿನಲ್ಲಿ ನಾನು 

ಅಕ್ಕರೆಯಂದದಲ್ಲಿ 

ಪ್ರೀತಿಯ ಔತಣವನ್ನೇ 

ಉಣಬಡಿಸಿದೆ ನಲ್ಲೆ ನೀನು 

ಮರೆವೆನೇನು ನಿನ್ನನ್ನು 

ಜೊತೆಯಾಗಿಸಬಂದ 

ಶ್ರಾವಣ ಮಾಸವನ್ನು.

ಶ್ರಾವಣ ಮಾಸದ..........

ಕುರುಡು ಕಾಂಚಾಣಕ್ಕೆ 

ಎಂದೂ ಬೆಲೆ ನೀಡಿದವಳಲ್ಲ 


ಬಡತನದ ಬದುಕಿನಲ್ಲೇ 

ಸರ್ವಸ್ವವನ್ನೂ 

ನನಗೆ ನೀಡಿದೆಯಲ್ಲ 

ಆ ನಿನ್ನ ಪ್ರೇಮದ ಮುಂದೆ 

ನಾನು ಬಹಳ ಚಿಕ್ಕವನಾದೆನಲ್ಲ 

ಹಸಿರು ಸೇರೆಯುಟ್ಟ ದಿನ 

ನಿನ್ನ ರೂಪರಾಶಿಯ ಸಿರಿಯನ್ನು 

ಮರೆಯಲಾರೆನಲ್ಲ. 

ಶ್ರಾವಣ ಮಾಸದ...........

ಬಾಳ ಗೆಳತಿಯಾದೆ ನೀನು 

ನಿನ್ನ ಅಧ್ಭುತ ರಮ್ಯ 

ಭಾವನೆಗಳಿಗೆ ಸೋತವನು 

ಹಗಲಿರುಳು ನಿನ್ನ 

ಪಡೆವ ಹಂಬಲದಲ್ಲಿ 

ಹೃದಯವನ್ನು ಗೆದ್ದವನು 

ಸಿರಿವಂತರ ಮಗಳು 

ಮುದ್ದೆ ಸಾರನ್ನೇ ನೀಡಿ 

ನಿನ್ನ ಪ್ರೇಮವನ್ನು ಪಡೆದವನು 

ಎಂತಹ ನಿರ್ಭಾಗ್ಯನೇ ನಾನು 

ಬದುಕಿನಲ್ಲಿ ಕಷ್ಟವನ್ನೇ ಕೊಟ್ಟವನು.

ಶ್ರಾವಣ ಮಾಸದ.........


ಶ್ರಾವಣ ಮುಗಿದು ಆಶಾಡ 

ಮೂಡಣದಿಂದ ಬಂದಿರಲು 

ಒಂದಾದ ಹೃದಯಗಳು ಜೊತೆಯಾಗಿ 

ಸುಖ ಸಂಸಾರವನ್ನು ಹೂಡಿರಲು 

ನಿನ್ನವರು ಕೊಟ್ಟ ಕಾಟಗಳನೆಲ್ಲ 

ತಾಳ್ಮೆಯಿಂದಲೆ ಬಾಳಿನುದ್ದಕು ಸಹಿಸಿರಲು 

ಕೊನೆಗೆ ಒಳ್ಳೆ ದಿನವೊಂದು ಬಂದು 

ನಿನ್ನವರೆಲ್ಲ ಆಗಮಿಸಿ ನಮ್ಮನ್ನು ಹರಸಿರಲು.

ಶ್ರಾವಣ ಮಾಸದ............ 

ಶ್ರಾವಣ ಮಾಸದಿ ಮೂಡಿಬಂದ 

ನಮ್ಮ ಪ್ರೇಮ ಮಿಲನಕ್ಕೆ 

ಚಂದ್ರ ನೀಡಿಹ 

ಹುಣ್ಣಿಮೆಯ ಬೆಳಕಿನಲ್ಲಿ 

ಎಣೆಯಿರಲಿಲ್ಲ ನಮ್ಮ ಸಂತಸಕ್ಕೆ 

ಕೈ ತುತ್ತನ್ನು ನೀಡಿ 

ಸಲಹಿದವಳು ಮಕ್ಕಳನ್ನು 

ಸರಿಸಾಟಿಯೆಲ್ಲಿತ್ತು ನಮ್ಮ ಹರುಷಕ್ಕೆ 

ನನ್ನ ಬಾಳಿನಲ್ಲಿ ಬಂದ 

ಪ್ರೇಮದರಸಿಯು ನೀನು 

ಎಲ್ಲ ಸುಖವನ್ನೂ ಉಂಡೆ 

ಕಿಚ್ಚು ಹಚ್ಚಲೇನು ಸ್ವರ್ಗಕ್ಕೆ.


ಶ್ರಾವಣ ಮಾಸದ............

ಪ್ರೇಮಕ್ಕೆ ಅಂತಸ್ತು ಎಂದೂ 

ಅಡ್ಡಿ ಬರದೆಂದು ತೋರಿಸಿಕೊಟ್ಟವಳು 

ಬಾಳಿನಲ್ಲಿ ಅನುರಾಗದಲೆಗೊಂದು 

ಅರ್ಥವಿರುವುದನ್ನು 

ಮನವರಿಕೆ ಮಾಡಿಕೊಟ್ಟವಳು 

ಬಡತನ ಸಿರಿತನಗಳ ನಡುವಿನ 

ಅಂತರವನ್ನು ದೂರ ಸರಿಸಿದವಳು 

ಬಾಳಿನ ಬೆಳಕಾಗಿ ಹೃದಯದ ಕಣ್ಣಾಗಿ 

ಎದೆಯೊಳಗೆ ಭಾಗ್ಯದೇವತೆಯಾಗಿ ನೆಲೆನಿಂತವಳು.

ಶ್ರಾವಣ ಮಾಸದ..............

            **********************************************************************


ಕಾಮೆಂಟ್‌ಗಳು