ನನ್ನ ಕವನಗಳು

ಶ್ರಾವಣದ ಪ್ರೇಮಿಗಳು - ನೆಲದ ಋಣ

ನೆಲದ ಋಣವು ಇರುವ ತನಕ ಬದುಕಬೇಕು  ಜಲದ ರುಚಿಯ  ಅಳೆಯದಂತೆ ಕುಡಿಯಬೇಕು  ಗಂಗೆ ತಾನು ಪವಿತ್ರೆಯೆಂದು  ನಾವು ತಿಳಿದಿರಬೇಕು  ಭೂಮಿ ತಾಯಿಗೆ ನಾವು  ಅತಿಥಿಗಳೆಂಬುದನ್ನು ಅರಿಯಬೇಕು. ನೆಲದ ಋಣವು............ ಜೀವರಸವ ತುಂಬಿಕಳಿಸಿಹ  ಯಾತ್ರೆಗಾಗಿ ಎಂದು  ತನುವು ಮನವು ಧನವು ಕೂಡ  ಅವನದೇ ಎಂದು  ತಿಳಿಯ ಹೊರಟ ಮನಸಿನಾಳ  ಬಹಳ ಹಗುರವೆಂದು  ಮರೆಯದಂತೆ ನಾವು ಬಂದ  ಕೆಲಸವನ್ನು ಮುಗಿಸಬೇಕೆಂದು. ನೆಲದ ಋಣವು............... ಗಾಳಿ, ಬೆಳಕು, ನೀರನೆಲ್ಲ ನಮಗಾಗಿ ನೀಡಿರಲು  ಮರೆಯಬೇಕು ಕಷ್ಟಗಳನು  ಸುಖವು ಬಂದಿರಲು  ಪ್ರಕೃತಿಯ ಸೊಬಗನ್ನು  ಸವಿಯುತ್ತ ಕಳೆದಿರಲು  ಬದುಕಿಗೊಂದರ್ಥವಿರುವುದನ್ನು  ತಿಳಿಯುತಿರಲು. ನೆಲದ ಋಣವು................ ಭುವಿಯ ನಾಕ ಸಿಹಿಯ ಜೊತೆಗೆ  ಕಹಿಯ ನೀಡಿರಲು  ಹೆದರದಂತೆ ನಾಕ ನರಕಗಳನ್ನು  ಸಮನೆಂದು ಸ್ವೀಕರಿಸಿರಲು  ನೆಮ್ಮದಿಯ ಕ್ಷಣಗಳು  ಬದುಕಿನಲ್ಲಿ ತಾವಾಗೇ ಬರುತಿರಲು  ಅವಕಾಶಕ್ಕಾಗಿ ಕಾಯಬೇಕು  ನಮ್ಮ ಸರದಿ ಮುಂದಿರಲು. ನೆಲದ ಋಣವು............. ಬಾಳಿನ ಬೆಳಕಿಗಾಗಿ ಕೊಂಚ  ವಿರಮಿಸಲೇಬೇಕು  ಜೀವನವೊಂದು ಭಾಗ್ಯದೊಡಲೆಂದು  ಭಾವಿಸಲೇ ಬೇಕು. ಹಸುರಿನುಸಿರು ಬರುವುದೆಂಬ  ಕಾತರದ ನಿರೀಕ್ಷೆಯಲ್ಲಿರಬೇಕು  ಮುಕ್ತಿ ಮಾರ್ಗ...

ಬದುಕೆಂಬ ನಾವೆ - ಮೋಹ



ಮೋಹವೆಂಬುದೊಂದು 
ಮಾಯಾಜಿಂಕೆಯಂತೆ 
ಮನಸನೆಲ್ಲ ಕದಡಿ 
ಗೊಂದಲಕ್ಕೆ ಸಿಲುಕುವಂತೆ 
ಎದೆಯ ಗೂಡ ಹೊಕ್ಕು 
ತನಗೆ ತಾನೇ ಸುಖಿಸುವಂತೆ 
ನೋವನೆಲ್ಲಾ ಒಂದು ಕ್ಷಣ 
ಮರೆಸುವುದಂತೆ.
ಮೋಹವೆಂಬುದೊಂದು.........
ಮೌನ ತಾಳಿ ಮೋಹಗೊಂಡು 
ಮಾತನಾಡಿದೆ 
ನಾಳೆ ಏನೋ ಎಂಬ 
ಚಿಂತೆಯು ಮನಸ ಕಾಡಿದೆ
ಪ್ರೇಮದಾಳವನ್ನು ಹೊಕ್ಕು 
ನಿನ್ನಲ್ಲಿ ಸರಸವಾಡಿದೆ 
ರಾಗವೊಂದು ಹರಿಯುತಿರಲು 
ತನ್ನ ಪಾಡಿಗೆ ಹಾಡಿದೆ.
ಮೋಹವೆಂಬುದೊಂದು.........

ಮನಸು ಮೋಹದ
ಮಾಯಾಜಾಲದಲ್ಲಿ ಸಿಲುಕಿರೆ 
ಪ್ರೇಮವೆಂಬುದು ಅಮರವೆಂಬ 
ಸತ್ಯವನ್ನು ಅರಿತಿರೆ 
ಬಿಸಿಲು ಮಳೆಯಲಿ ಬೆಂದು 
ನೊಂದು ಬಾಳು ನಡೆದಿರೆ 
ಎಂಥ ಸುಖವೇ ಗೆಳತಿ 
ಮೌನದ ಮೋಹದಲ್ಲೇ ನಾವಿರೆ.
ಮೋಹವೆಂಬುದೊಂದು........
ಲೋಕದಲ್ಲಿ ಮೋಹವೆಂಬುದಕ್ಕೆ 
ಎಲ್ಲ ಶರಣಾಗುವವರೆ 
ನಾವೇನು ಹೆಚ್ಚಲ್ಲಾ 
ಪ್ರೇಮ ಪಲ್ಲವಿಯ ಬಿಡುವವರೆ 
ರಾಗವನ್ನು ಹಾಡಿ ಪಾಡಿ 
ವೀಣೆಯನ್ನು ನುಡಿಸುವವರೆ 
ತಾಳ ಬದ್ಧ ಲಯವ ಕಂಡು 
ಪ್ರೇಮರಾಗ ಹಾಡುವವರೆ.
ಮೋಹವೆಂಬುದೊಂದು........
ಮೋಡ ಕರಗಿತು ತನ್ನಲ್ಲೇ 
ಮೋಹಕ್ಕೆ ವಶವಾಗಿ 
ಹಮ್ಮು ಗಿಮ್ಮು ಎಲ್ಲ 

ಹೃದಯದಿಂದ ನಾಶವಾಗಿ
ವೀಣೆ ನುಡಿಸುತಿರುವೆವು 
ಪ್ರೇಮದ ಪರವಶರಾಗಿ 
ಬಾಳ ಗೀತೆಯನ್ನು 
ಹಾಡುತಿಹೆವು ಸತ್ಯದ ವಶರಾಗಿ. ಮೋಹವೆಂಬುದೊಂದು........
ನೋವು ಬಾರದಿರಲಿ 
ಮೋಹದಲ್ಲೇ ನಲಿವ ನಾವು 
ಭಾವದಲ್ಲಿ ಮಿಡಿಯುವ 
ಪ್ರೇಮಿಗಳಲ್ಲವೇ ನಾವು 
ಮಾಯಾಜಿಂಕೆಯೆಂದು 
ಭ್ರಮೆಯಲೇಕೆ ಬೆಂದೆವು 
ಚಪಲತೆಯನ್ನು ಮರೆತು 
ನೈಜತೆಯಿಂದ ಏಕೆ ನೊಂದೆವು.
ಮೋಹವೆಂಬುದೊಂದು.........
***********************************

ಕಾಮೆಂಟ್‌ಗಳು