ನನ್ನ ಕವನಗಳು

ಶ್ರಾವಣದ ಪ್ರೇಮಿಗಳು - ನೆಲದ ಋಣ

ನೆಲದ ಋಣವು ಇರುವ ತನಕ ಬದುಕಬೇಕು  ಜಲದ ರುಚಿಯ  ಅಳೆಯದಂತೆ ಕುಡಿಯಬೇಕು  ಗಂಗೆ ತಾನು ಪವಿತ್ರೆಯೆಂದು  ನಾವು ತಿಳಿದಿರಬೇಕು  ಭೂಮಿ ತಾಯಿಗೆ ನಾವು  ಅತಿಥಿಗಳೆಂಬುದನ್ನು ಅರಿಯಬೇಕು. ನೆಲದ ಋಣವು............ ಜೀವರಸವ ತುಂಬಿಕಳಿಸಿಹ  ಯಾತ್ರೆಗಾಗಿ ಎಂದು  ತನುವು ಮನವು ಧನವು ಕೂಡ  ಅವನದೇ ಎಂದು  ತಿಳಿಯ ಹೊರಟ ಮನಸಿನಾಳ  ಬಹಳ ಹಗುರವೆಂದು  ಮರೆಯದಂತೆ ನಾವು ಬಂದ  ಕೆಲಸವನ್ನು ಮುಗಿಸಬೇಕೆಂದು. ನೆಲದ ಋಣವು............... ಗಾಳಿ, ಬೆಳಕು, ನೀರನೆಲ್ಲ ನಮಗಾಗಿ ನೀಡಿರಲು  ಮರೆಯಬೇಕು ಕಷ್ಟಗಳನು  ಸುಖವು ಬಂದಿರಲು  ಪ್ರಕೃತಿಯ ಸೊಬಗನ್ನು  ಸವಿಯುತ್ತ ಕಳೆದಿರಲು  ಬದುಕಿಗೊಂದರ್ಥವಿರುವುದನ್ನು  ತಿಳಿಯುತಿರಲು. ನೆಲದ ಋಣವು................ ಭುವಿಯ ನಾಕ ಸಿಹಿಯ ಜೊತೆಗೆ  ಕಹಿಯ ನೀಡಿರಲು  ಹೆದರದಂತೆ ನಾಕ ನರಕಗಳನ್ನು  ಸಮನೆಂದು ಸ್ವೀಕರಿಸಿರಲು  ನೆಮ್ಮದಿಯ ಕ್ಷಣಗಳು  ಬದುಕಿನಲ್ಲಿ ತಾವಾಗೇ ಬರುತಿರಲು  ಅವಕಾಶಕ್ಕಾಗಿ ಕಾಯಬೇಕು  ನಮ್ಮ ಸರದಿ ಮುಂದಿರಲು. ನೆಲದ ಋಣವು............. ಬಾಳಿನ ಬೆಳಕಿಗಾಗಿ ಕೊಂಚ  ವಿರಮಿಸಲೇಬೇಕು  ಜೀವನವೊಂದು ಭಾಗ್ಯದೊಡಲೆಂದು  ಭಾವಿಸಲೇ ಬೇಕು. ಹಸುರಿನುಸಿರು ಬರುವುದೆಂಬ  ಕಾತರದ ನಿರೀಕ್ಷೆಯಲ್ಲಿರಬೇಕು  ಮುಕ್ತಿ ಮಾರ್ಗ...

ಬದುಕೆಂಬ ನಾವೆ - ಅಮ್ಮ


ಅಮ್ಮ ಎನ್ನುವ ಎರಡಕ್ಷರದಲ್ಲಿ 

ಸರ್ವ ದೇವತೆಗಳ ಸ್ವರೂಪವೆ ಅಡಗಿದೆ 

ಮಾತೆಯ ಮಡಿಲಿನಲ್ಲಿ ನಿದ್ರಿಸಿದ 

ಬಾಲ್ಯದ ನೆನಪುಗಳು ಬರುತ್ತಿದೆ 

ಅಂತರಂಗದ ಪ್ರೇಮದ ಮಾತೆ 

ಸರ್ವಸ್ವವನ್ನೂ ನನಗಾಗಿ ತ್ಯಾಗವ ಮಾಡಿದೆ 

ಕರುಳಿನ ಬೆಸುಗೆಯು ಜೀವನಜೊತೆಯಲಿ 

ಮಾತೃವಾತ್ಸಲ್ಯವನು ತರುತ್ತಿದೆ.

ಅಮ್ಮ ಎನ್ನುವ ಎರಡಕ್ಷರದಲ್ಲಿ.........

ಅಮ್ಮ ನಿನ್ನ ತೋಳ್ತೆಕ್ಕೆಯಲ್ಲಿ

ಕಂದನಾಗಿ ಬೆಳೆದ ಬಾಲ್ಯದ

ಆ ದಿನಗಳು ಆತ್ಮದ

ಬಂಧನವಾಗಿಸಿಹುದು 

ಭಾವವೆಂಬ ಭಕ್ತಿಯ ಕಣಗಳು 

ನೀನಾಡಿಸಿದ ಆಟಗಳ ನಡುವೆ 

ಕಲಿಸಿದ ತೊದಲು ನುಡಿಗಳು 

ಜೀವನದಲ್ಲಿ ಶಾಶ್ವತವಾಗಿ ಉಳಿದವು 

ಮರೆಯಲಾಗದ ಬಂಗಾರದ ಕ್ಷಣಗಳು.


ಅಮ್ಮ ಎನ್ನುವ ಎರಡಕ್ಷರದಲ್ಲಿ........

ಭಗವಂತನ ಕೃಪೆಯಿಂದಾಗಿ ಜನಿಸಿಹೆ 

ನಿನ್ನ ಮುದ್ದಿನ ಮಗನಾಗಿ ಬೆಳೆದಿಹೆ 

ಅಮ್ಮ ನೀನು ಕಷ್ಟ ಪಡುತ್ತಿದ್ದರೆ 

ಮುಗ್ಧನಾಗಿ ಏನೂ ಅರಿಯದೆ ವೀಕ್ಷಿಸಿದೆ 

ಎಲ್ಲ ನೆನಪುಗಳೂ ಕಣ್ಮುಂದೆ ಬಂದಿರಲು 

ಅಂದಿನ ದಿನಗಳನ್ನು ನೆನೆದು ನೊಂದಿಹೆ 

ಬಾಲ್ಯದ ಅಸಹಾಯಕತೆಯನ್ನು ಮನ್ನಿಸೆಂದು 

ನಿನ್ನ ಪಾದ ಕಮಲಗಳಲ್ಲಿಂದು ನಮಿಸಿಹೆ.

ಅಮ್ಮ ಎನ್ನುವ ಎರಡಕ್ಷರದಲ್ಲಿ.........

ಸಭ್ಯತೆ, ಶಾಂತಿ, ಸಹನೆ ಎಲ್ಲವನ್ನು ನೀಡಿ 

ನನಗೆ ಸಂಸ್ಕೃತಿ ಸಂಸ್ಕಾರಗಳನ್ನು ಕಲಿಸಿದೆ 

ಒಳ್ಳೆಯ ಮನುಷ್ಯನಾಗುವಂತೆ ಬಯಸಿದವಳು 

ದೇಶಭಕ್ತನಾಗುವಂತೆ ನೀನೇ ತಾನೆ ಅರುಹಿದೆ 

ಆಕಾಶದೆತ್ತರಕ್ಕೆ ಬೆಳೆಯುವಂತೆ ಆಸೆಪಟ್ಟು 

ತಿಳಿಯ ಹೇಳಿ ನೀನು ತಾನೆ ಮೊದಲ ಗುರುವಾದೆ 

ನೀ ಕಂಡ ಕನಸುಗಳನೆಲ್ಲ ಈಡೇರಿಸುವಲ್ಲಿ 

ತಾಯಿಯಾಗಿ ಜೊತೆಯಿರಲು ಒಳ್ಳೆಯ ಮಗನಾದೆ.

ಅಮ್ಮ ಎನ್ನುವ ಎರಡಕ್ಷರದಲ್ಲಿ..........

ನಿನ್ನ ಆರೈಕೆಯ ಶ್ರಮದ ಫಲವಾಗಿ 

ಸತ್ಪ್ರಜೆಯಾಗಿ ಬೆಳೆದು ನಿಂತಿರುವೆ 


ನಿನ್ನ ಆಸೆ ಕನಸುಗಳನೆಲ್ಲ ಈಡೇರಿಸಲು

ನನ್ನ ಜೀವನವನ್ನೇ ಮುಡುಪಾಗಿಟ್ಟಿರುವೆ 

ತಾಯಿಗೆ ತಕ್ಕ ಮಗನಾಗಿರಬೇಕೆಂದು 

ಹಗಲಿರುಳೂ ನಿನ್ನಾಸೆಯಂತೆ ದುಡಿಯುತ್ತಿರುವೆ 

ಅಮ್ಮ ನಿನ್ನ ಕ್ಷೇಮದ ಬದುಕಿಗಾಗಿ 

ಹೃದಯದಾಳದ ಮನಸ್ಸಿನಿಂದ ಮಿಡಿಯುತ್ತಿರುವೆ. ಅಮ್ಮ ಎನ್ನುವ ಎರಡಕ್ಷರದಲ್ಲಿ..........

ಅಮ್ಮ ನನ್ನ ಸರ್ವಸ್ವವೂ ನೀನೇ 

ನನ್ನ ಶ್ರೇಯಸ್ಸಿಗಾಗಿ ದುಡಿದವಳೂ ನೀನೇ 

ನಿನ್ನ ಮರೆತು ಬದುಕಬಲ್ಲೆನೇನು ನಾನು 

ಕಣ್ಮುಂದೆಯೇ ಇರುವ ದೇವರೂ ನೀನೇ 

ಚಿಂತೆಯನು ಮಾಡದಿರು ಮಾತೆ ಎಂದೂ 

ಅಪಚಾರವನ್ನು ಮಾಡದಂತೆ ಹೇಳಿಹೆ ನೀನೇ 

ನಿನ್ನಾಸೆಯಂತೆಯೇ ಬದುಕಿ ಸಾಧಿಸಲು 

ಆಗಾಗ ಎಚ್ಚರಿಸುತ್ತಿರುವವಳೂ ನೀನೇ 

ಪ್ರಪಂಚದಲ್ಲಿ ನನಗಾಗಿ ಹಂಬಲಿಸಿ 

ಪ್ರೇಮದಲಿ ಹಾರೈಸಿ ಬೆಳೆಸಿರುವವಳೂ ನೀನೇ.

ಅಮ್ಮ ಎನ್ನುವ ಎರಡಕ್ಷರದಲ್ಲಿ.........

**************************************************

ಕಾಮೆಂಟ್‌ಗಳು