ನನ್ನ ಕವನಗಳು

ಶ್ರಾವಣದ ಪ್ರೇಮಿಗಳು - ನೆಲದ ಋಣ

ನೆಲದ ಋಣವು ಇರುವ ತನಕ ಬದುಕಬೇಕು  ಜಲದ ರುಚಿಯ  ಅಳೆಯದಂತೆ ಕುಡಿಯಬೇಕು  ಗಂಗೆ ತಾನು ಪವಿತ್ರೆಯೆಂದು  ನಾವು ತಿಳಿದಿರಬೇಕು  ಭೂಮಿ ತಾಯಿಗೆ ನಾವು  ಅತಿಥಿಗಳೆಂಬುದನ್ನು ಅರಿಯಬೇಕು. ನೆಲದ ಋಣವು............ ಜೀವರಸವ ತುಂಬಿಕಳಿಸಿಹ  ಯಾತ್ರೆಗಾಗಿ ಎಂದು  ತನುವು ಮನವು ಧನವು ಕೂಡ  ಅವನದೇ ಎಂದು  ತಿಳಿಯ ಹೊರಟ ಮನಸಿನಾಳ  ಬಹಳ ಹಗುರವೆಂದು  ಮರೆಯದಂತೆ ನಾವು ಬಂದ  ಕೆಲಸವನ್ನು ಮುಗಿಸಬೇಕೆಂದು. ನೆಲದ ಋಣವು............... ಗಾಳಿ, ಬೆಳಕು, ನೀರನೆಲ್ಲ ನಮಗಾಗಿ ನೀಡಿರಲು  ಮರೆಯಬೇಕು ಕಷ್ಟಗಳನು  ಸುಖವು ಬಂದಿರಲು  ಪ್ರಕೃತಿಯ ಸೊಬಗನ್ನು  ಸವಿಯುತ್ತ ಕಳೆದಿರಲು  ಬದುಕಿಗೊಂದರ್ಥವಿರುವುದನ್ನು  ತಿಳಿಯುತಿರಲು. ನೆಲದ ಋಣವು................ ಭುವಿಯ ನಾಕ ಸಿಹಿಯ ಜೊತೆಗೆ  ಕಹಿಯ ನೀಡಿರಲು  ಹೆದರದಂತೆ ನಾಕ ನರಕಗಳನ್ನು  ಸಮನೆಂದು ಸ್ವೀಕರಿಸಿರಲು  ನೆಮ್ಮದಿಯ ಕ್ಷಣಗಳು  ಬದುಕಿನಲ್ಲಿ ತಾವಾಗೇ ಬರುತಿರಲು  ಅವಕಾಶಕ್ಕಾಗಿ ಕಾಯಬೇಕು  ನಮ್ಮ ಸರದಿ ಮುಂದಿರಲು. ನೆಲದ ಋಣವು............. ಬಾಳಿನ ಬೆಳಕಿಗಾಗಿ ಕೊಂಚ  ವಿರಮಿಸಲೇಬೇಕು  ಜೀವನವೊಂದು ಭಾಗ್ಯದೊಡಲೆಂದು  ಭಾವಿಸಲೇ ಬೇಕು. ಹಸುರಿನುಸಿರು ಬರುವುದೆಂಬ  ಕಾತರದ ನಿರೀಕ್ಷೆಯಲ್ಲಿರಬೇಕು  ಮುಕ್ತಿ ಮಾರ್ಗ...

ಬದುಕೆಂಬ ನಾವೆ - ಕಲೆ

 

ಕಲೆಯ ಬಲೆಯನ್ನು 
ಹೆಣೆಯುವಾಸೆ 
ಧನ್ಯತೆಯನ್ನು ಜನರಲ್ಲಿ 
ಮೆರೆಯುವಾಸೆ 
ಜ್ಯೋತಿಯೊಂದನು ಕತ್ತಲೆಯಲ್ಲಿ 
ಬೆಳಗುವಾಸೆ 
ಸರಸ ವಿರಸಗಳನೆಲ್ಲ 
ಸದಾ ಮೆರೆಯುವಾಸೆ.
ಕಲೆಯ ಬಲೆಯನ್ನು............
ರಾಮಾಯಣವು 
ಮಹಾಭಾರತ ಗೀತೆಗಳೆಲ್ಲಾ 
ಕಲೆಯೆಂಬ ಸಾಹಿತ್ಯದಿಂದ ತಾನೆ 
ಬಂದುವೆಲ್ಲಾ 
ಭೂಭಾರವನ್ನು ಇಳಿಸುವ 
ಮಾಧ್ಯಮಗಳೆಲ್ಲಾ 
ಪುರಾಣದ ಇತಿಹಾಸದಲ್ಲಿ ತಾನೆ 
ಬಂದು ಹೋದುವೆಲ್ಲಾ.
ಕಲೆಯ ಬಲೆಯನ್ನು.............

ಪ್ರೀತಿಯೆಂಬ ಚೆಲುವು
ಕಲೆಯ ಬಲೆಯಿಂದಲೇ
ಸೌಂಧರ್ಯ ರಾಶಿಯು 
ಚಿಮ್ಮುವುದು ಪ್ರೇಮದಿಂದಲೇ 
ರಾಗ ತಾಳ ಲಯವೆಲ್ಲಾ 
ಪ್ರೇಮಸೌರಭದಿಂದಲೇ 
ಸಪ್ತ ಸ್ವರಗಳಿಗೆ ಮೊರೆ 
ಹೋಗುವುದು ಎದೆಯಾಸೆಯಿಂದಲೇ.
ಕಲೆಯ ಬಲೆಯನ್ನು............
ಹಳೆಯದನೆಲ್ಲಾ ಮರೆತು 
ಹೊಸದೊಂದ ನೀಡುವಾಸೆ 
ಅಡ್ಡಿ ಆತಂಕಗಳೇ ಎದುರು 
ಬಂದು ಅಬ್ಬರಿಸುವಾಸೆ 
ತೋಚದಾಯ್ತು ಮುಂದೇನು ಹೇಗೆ 
ಕಲೆಯ ಬೆಳೆಸುವಾಸೆ 
ಮಡಿವವರೆಗೂ 
ಬಿಡಲಾರೆನೆಂದಿತು ಮನದೊಳಗಿನಾಸೆ.
ಕಲೆಯ ಬಲೆಯನ್ನು.............
ಮಳೆಯ ಮುತ್ತಿನಂಥ ಹನಿಗಳು 
ಮುಗಿಲಿನಿಂದ ಜಾರಿರೆ 
ಬಣ್ಣ ಬಣ್ಣದ ಚಿತ್ತಾರದ ರಂಗುಗಳೇ 

ಕಣ್ಣ ಮುಂದೆ ಸಾಗಿರೆ
ಕಲೆಯ ಬಲೆಗೆ ಸಿಲುಕದಿರುವವರ್ಯಾರು 
ಎಲ್ಲ ರಸಿಕರೇ
ಸಂಗೀತ ಸುಧೆಯಿಂದ 
ಅಮರ ಪ್ರೇಮವು ನೆಲೆಸಿರೆ.
ಕಲೆಯ ಬಲೆಯನ್ನು...........
ಕೊಳಲನೂದಿ ಮುರಳಿಲೋಲ 
ಎಲ್ಲರನ್ನು ಆಕರ್ಷಿಸಿದ 
ರಾಧೆಯೊಡನೆ ಸರಸವಾಡಿ 
ಕಲೆಗೆ ಬೆಲೆಯ ನೀಡಿದ 
ನಾಟ್ಯರಾಜ ನಟರಾಜ 
ನರ್ತನದಿಂದಲೇ ಆಗಸವೇರಿದ 
ಕಲೆಯು ಜೀವನ ರಂಗದ 
ಬಹುಭಾಗ್ಯವೆಂದು ಸಾರಿದ.
ಕಲೆಯ ಬಲೆಯನ್ನು............
**************************************


ಕಾಮೆಂಟ್‌ಗಳು