ನನ್ನ ಕವನಗಳು

ಶ್ರಾವಣದ ಪ್ರೇಮಿಗಳು - ನೆಲದ ಋಣ

ನೆಲದ ಋಣವು ಇರುವ ತನಕ ಬದುಕಬೇಕು  ಜಲದ ರುಚಿಯ  ಅಳೆಯದಂತೆ ಕುಡಿಯಬೇಕು  ಗಂಗೆ ತಾನು ಪವಿತ್ರೆಯೆಂದು  ನಾವು ತಿಳಿದಿರಬೇಕು  ಭೂಮಿ ತಾಯಿಗೆ ನಾವು  ಅತಿಥಿಗಳೆಂಬುದನ್ನು ಅರಿಯಬೇಕು. ನೆಲದ ಋಣವು............ ಜೀವರಸವ ತುಂಬಿಕಳಿಸಿಹ  ಯಾತ್ರೆಗಾಗಿ ಎಂದು  ತನುವು ಮನವು ಧನವು ಕೂಡ  ಅವನದೇ ಎಂದು  ತಿಳಿಯ ಹೊರಟ ಮನಸಿನಾಳ  ಬಹಳ ಹಗುರವೆಂದು  ಮರೆಯದಂತೆ ನಾವು ಬಂದ  ಕೆಲಸವನ್ನು ಮುಗಿಸಬೇಕೆಂದು. ನೆಲದ ಋಣವು............... ಗಾಳಿ, ಬೆಳಕು, ನೀರನೆಲ್ಲ ನಮಗಾಗಿ ನೀಡಿರಲು  ಮರೆಯಬೇಕು ಕಷ್ಟಗಳನು  ಸುಖವು ಬಂದಿರಲು  ಪ್ರಕೃತಿಯ ಸೊಬಗನ್ನು  ಸವಿಯುತ್ತ ಕಳೆದಿರಲು  ಬದುಕಿಗೊಂದರ್ಥವಿರುವುದನ್ನು  ತಿಳಿಯುತಿರಲು. ನೆಲದ ಋಣವು................ ಭುವಿಯ ನಾಕ ಸಿಹಿಯ ಜೊತೆಗೆ  ಕಹಿಯ ನೀಡಿರಲು  ಹೆದರದಂತೆ ನಾಕ ನರಕಗಳನ್ನು  ಸಮನೆಂದು ಸ್ವೀಕರಿಸಿರಲು  ನೆಮ್ಮದಿಯ ಕ್ಷಣಗಳು  ಬದುಕಿನಲ್ಲಿ ತಾವಾಗೇ ಬರುತಿರಲು  ಅವಕಾಶಕ್ಕಾಗಿ ಕಾಯಬೇಕು  ನಮ್ಮ ಸರದಿ ಮುಂದಿರಲು. ನೆಲದ ಋಣವು............. ಬಾಳಿನ ಬೆಳಕಿಗಾಗಿ ಕೊಂಚ  ವಿರಮಿಸಲೇಬೇಕು  ಜೀವನವೊಂದು ಭಾಗ್ಯದೊಡಲೆಂದು  ಭಾವಿಸಲೇ ಬೇಕು. ಹಸುರಿನುಸಿರು ಬರುವುದೆಂಬ  ಕಾತರದ ನಿರೀಕ್ಷೆಯಲ್ಲಿರಬೇಕು  ಮುಕ್ತಿ ಮಾರ್ಗ...

ಬದುಕೆಂಬ ನಾವೆ - ನಮ್ಮ ದೇಶ

 

ನಮ್ಮ ದೇಶ ನಮಗೆ ಚೆನ್ನ 

ಮಣ್ಣಿನಲ್ಲಿ ಬೆಳೆವುದೆಲ್ಲ ಚಿನ್ನ 

ಕನ್ನಡ ಭಾಷೆಯ ಬಲ್ಲವನೇ ರನ್ನ 

ಸಾಹಿತ್ಯ ಕೃಷಿಯಲ್ಲಿ ಇವ ಜನ್ನ 

ನಮ್ಮ ನಾಡಿಗೆ ಸಾಟಿಯೇ ಇಲ್ಲ 

ಮೋಹಕೆ ಮರುಳಾಗದವರೇ ಎಲ್ಲ 

ಪರದೇಶದ ವ್ಯಾಮೋಹ ತ್ಯಜಿಸಿರೆ ನಾಡೆಲ್ಲ 

ದೇಶ ಭಕ್ತಿಯೆಂಬ ಭಾವನೆಗೆ ಒಳಗಾಗಿರೆಲ್ಲ.

ನಮ್ಮ ದೇಶ ನಮಗೆ ಚೆನ್ನ...................

ಮೌಢ್ಯತೆ ತುಂಬಿರೆ ಎಲ್ಲೆಡೆಯು 

ಮೌಲ್ಯಕ್ಕೆ ಕಾತರಿಸಿದೆ ಎನ್ನೆದೆಯು 

ಮಣ್ಣಿನ ವಾಸನೆ ಮೂಗಿಗೆ ಬಡಿದಿರೆ 

ನಾಡಿಗೆ ನಾಡೇ ಸಂತಸದಿಂದಿರೆ 

ಹೃದಯವು ಹರುಷದಿಂದ ಕೂಡಿರೆ 

ಕರುಳಿನ ಒಲವಲಿ ಕಂದನ ಕೂಗಿರೆ 

ಭಾರತ ಮಾತೆಯು ನಗು ನಗುತಿರೆ 

ಆಗಲೆ ಎಲ್ಲರು ನೆಮ್ಮದಿಯಿಂದ ಬದುಕಿರೆ.

ನಮ್ಮ ದೇಶ ನಮಗೆ ಚೆನ್ನ...................

ಒಲುಮೆಯೆಂಬ ಶಕ್ತಿಯನ್ನು ತುಂಬಿ

ಎನ್ನ ಮನಸು ಹಾಡಿನಲ್ಲಿ ಮುಳುಗಿತು 

ಎದೆಯ ಭಾರವೆಲ್ಲ ಹಗುರವಾಗಿ 

ಹೂ ನಗೆಯೊಂದ ಮುದದಿಂದ ಮುಡಿಯಿತು 


ಹೊಂಬೆಳಕಲಿ ಕಂಡಿದೆ ಸತ್ಯದ ಹಾದಿಯು 

ಒಮ್ಮೆಲೆ ಒಡಲಿನ ಒಳ ಕಣ್ತೆರೆಯಿತು 

ಜನ್ಮ ಭೂಮಿ ಜನನಿಯಲ್ಲಿ ಭಕ್ತಿಭಾವ 

ಸುಪ್ತವಾಗೆ ಎದೆಯೊಳಗೆ ಕನವರಿಸಿತು.

ನಮ್ಮ ದೇಶ ನಮಗೆ ಚೆನ್ನ...................

ಜೀವನದಲ್ಲಿ ಭರವಸೆಯ ಬದುಕನ್ನು 

ದಯೆಪಾಲಿಸು ನೀನು ಭಾರತ ಮಾತೆ 

ಶುಭ ಗಳಿಗೆಗಾಗಿ ಕಾದು ಭಕ್ತಿಯೆಂಬ 

ಭಾವದಿಂದ ಮನತುಂಬಿ ಹಾಡುತ್ತಿಹೆ ಗೀತೆ 

ಜನನಿ ಜನ್ಮ ಭೂಮಿಯಂಗಳದಲ್ಲಿ 

ಸುಂದರವಾಗಿ ಬೆಳಗುತ್ತಿರೆ ಹಣತೆ 

ವಿಶ್ವದೆಲ್ಲೆಡೆ ಪ್ರಜ್ವಲಿಸುತ್ತಿದೆ 

ಇಂದು ನಿನ್ನ ಕೀರ್ತಿಯೆಂಬ ಘನತೆ.

ನಮ್ಮ ದೇಶ ನಮಗೆ ಚೆನ್ನ..................

ಭಾಗ್ಯವಂತರಲ್ಲವೇ ನಾವು ಪೂರ್ವ 

ಜನುಮ ಪುಣ್ಯದಿಂದ ನಿನ್ನಲುದಿಸಿಹೆವು 

ಶುಭ ಸೌಭಾಗ್ಯವೆಮ್ಮದು ಮಾತೆಯೆ 

ನಿನ್ನ ಮಕ್ಕಳೆಂದು ಕರೆಸಿಕೊಂಡಿಹೆವು 

ಜನ್ಮ ಭೂಮಿ ಏಳ್ಗೆಗಾಗಿ ನಮ್ಮ ಜೀವನ 

ಸಂಪೂರ್ಣ ನಿನಗೆಂದೇ ಮುಡುಪಿಟ್ಟಿರುವೆವು 

ತಾಯಿ ನಾಡು ದೇಶಕ್ಕಾಗಿ ಎಂತಹ ಕಠಿಣ 


ತ್ಯಾಗಕ್ಕಾದರೂ ಸಿದ್ದರಾಗಿ ನಿಂತಿರುವೆವು.

ನಮ್ಮ ದೇಶ ನಮಗೆ ಚೆನ್ನ................

ತಾಯಿ ಭರತ ಮಾತೆ ಕೇಳು ನಮ್ಮ 

ಮನಸು ಹಾಲಿನಂತೆ ಪರಿಶುದ್ಧವಾಗಿಹುದು 

ನಿನ್ನ ಏಳಿಗೆಗಾಗಿ ತನುಮನವೆಲ್ಲ ಸದಾ 

ಕನವರಿಸಿ ಹಂಬಲಿಸಿ ಪರಿತಪಿಸಿಹುದು 

ನಿನ್ನಾಸೆಯ ನಗುವೆಂಬ ಹೂವಾಗಿ 

ನಿನ್ನಾಸರೆಯಲ್ಲೇ ಮನವು ಅರಳಿಹುದು 

ಮನಸು ಹರುಷದಿಂದ ನವಿರಾಗಿ 

ನಿನ್ನನ್ನೇ ನೆನೆದು ಆರಾಧಿಸಿಹುದು.

ನಮ್ಮ ದೇಶ ನಮಗೆ ಚೆನ್ನ................

ಒಲವು ಗೆಲುವು ಚೆಲುವುಗಳನೆಲ್ಲ 

ನಿನ್ನಾಸರೆಯಲ್ಲೇ ಮಾಗಿಸಿಹೆವು 

ಎಲ್ಲ ಕಾಲದಲ್ಲೂ ನರನಾಡಿಯೆಲ್ಲಾ 

ಜನ್ಮಭೂಮಿ ರಕ್ಷಣೆಗೆ ಮೀಸಲಿಹುದು 

ಬಾನು ಭುವಿಗಳೆಲ್ಲಾ ನಾಚಿ ನೀರಾಗಲು 

ನಮ್ಮ ದೇಶ ಭಕ್ತಿ ಮಾತ್ರ ಹೆಚ್ಚುವುದು 

ಮೋಹಕೆ ಎಂದೂ ವಶರಾಗದೆ

ದೇಶವ ಮುನ್ನಡೆಸಲು ಆಸೆ ಬಂದಿಹುದು.

ನಮ್ಮ ದೇಶ ನಮಗೆ ಚೆನ್ನ......................

ನಮ್ಮ ನಾಡಿಗೆ ನಾವೇ ಸಾಟಿ 


ಬೇರ್ಯಾರೂ ಸಹ ಪರಿವರ್ತಿಸಲಾರರು 

ದೇಶ ಭಕ್ತಿಯೆಂಬುದು ಶಾಶ್ವತವಾಗಿ 

ನೆಲೆಸಿರಲು ಯಾರೂ ಕೇಡನ್ನು ಬಯಸಲಾರರು 

ಕನ್ನಡಮ್ಮನ ಕಂದಗಳು ನಾವೆಂದೂ 

ಹೊನಲಿನ ಕಮಲದಂತೆ ಅರಳಿರುವವರು 

ಭಾರತ ಮಾತೆಯ ರಕ್ಷಣೆಗಾಗಿ 

ಸೈನಿಕರಂತೆ ಶಿಸ್ತಿನಿಂದ ಸಜ್ಜಾಗಿರುವವರು.

ನಮ್ಮ ದೇಶ ನಮಗೆ ಚೆನ್ನ........................

ನಮ್ಮ ತಾಯಿ ಭರತ ಮಾತೆ 

ಮಕ್ಕಳ ನಲಿವಿನಲ್ಲಿ ಸಂಭ್ರಮಿಸಿಹಳು 

ದಿವ್ಯ ಶಕ್ತಿಯನ್ನು ನಮಗೆಲ್ಲ ತುಂಬಿ 

ನೆಮ್ಮದಿಯ ಬದುಕನ್ನು ನೀಡಿ ಹರಸುತ್ತಿಹಳು 

ನೋವು ಸಂಕಟ ಸುಳಿಯದಂತೆ 

ಎಲ್ಲರಿಗೂ ಚೇತನ ನೀಡಿ ರಕ್ಷಿಸುತ್ತಿಹಳು 

ನಾವೆ ತಾನೆ ಧನ್ಯರು ಪುಣ್ಯವಂತರು 

ಭರತ ಭೂಮಿ ನಮ್ಮನೆಲ್ಲ ಕಾಪಾಡುತಿಹಳು.

ನಮ್ಮ ದೇಶ ನಮಗೆ ಚೆನ್ನ......................

*************************************


ಕಾಮೆಂಟ್‌ಗಳು