ನನ್ನ ಕವನಗಳು

ಶ್ರಾವಣದ ಪ್ರೇಮಿಗಳು - ನೆಲದ ಋಣ

ನೆಲದ ಋಣವು ಇರುವ ತನಕ ಬದುಕಬೇಕು  ಜಲದ ರುಚಿಯ  ಅಳೆಯದಂತೆ ಕುಡಿಯಬೇಕು  ಗಂಗೆ ತಾನು ಪವಿತ್ರೆಯೆಂದು  ನಾವು ತಿಳಿದಿರಬೇಕು  ಭೂಮಿ ತಾಯಿಗೆ ನಾವು  ಅತಿಥಿಗಳೆಂಬುದನ್ನು ಅರಿಯಬೇಕು. ನೆಲದ ಋಣವು............ ಜೀವರಸವ ತುಂಬಿಕಳಿಸಿಹ  ಯಾತ್ರೆಗಾಗಿ ಎಂದು  ತನುವು ಮನವು ಧನವು ಕೂಡ  ಅವನದೇ ಎಂದು  ತಿಳಿಯ ಹೊರಟ ಮನಸಿನಾಳ  ಬಹಳ ಹಗುರವೆಂದು  ಮರೆಯದಂತೆ ನಾವು ಬಂದ  ಕೆಲಸವನ್ನು ಮುಗಿಸಬೇಕೆಂದು. ನೆಲದ ಋಣವು............... ಗಾಳಿ, ಬೆಳಕು, ನೀರನೆಲ್ಲ ನಮಗಾಗಿ ನೀಡಿರಲು  ಮರೆಯಬೇಕು ಕಷ್ಟಗಳನು  ಸುಖವು ಬಂದಿರಲು  ಪ್ರಕೃತಿಯ ಸೊಬಗನ್ನು  ಸವಿಯುತ್ತ ಕಳೆದಿರಲು  ಬದುಕಿಗೊಂದರ್ಥವಿರುವುದನ್ನು  ತಿಳಿಯುತಿರಲು. ನೆಲದ ಋಣವು................ ಭುವಿಯ ನಾಕ ಸಿಹಿಯ ಜೊತೆಗೆ  ಕಹಿಯ ನೀಡಿರಲು  ಹೆದರದಂತೆ ನಾಕ ನರಕಗಳನ್ನು  ಸಮನೆಂದು ಸ್ವೀಕರಿಸಿರಲು  ನೆಮ್ಮದಿಯ ಕ್ಷಣಗಳು  ಬದುಕಿನಲ್ಲಿ ತಾವಾಗೇ ಬರುತಿರಲು  ಅವಕಾಶಕ್ಕಾಗಿ ಕಾಯಬೇಕು  ನಮ್ಮ ಸರದಿ ಮುಂದಿರಲು. ನೆಲದ ಋಣವು............. ಬಾಳಿನ ಬೆಳಕಿಗಾಗಿ ಕೊಂಚ  ವಿರಮಿಸಲೇಬೇಕು  ಜೀವನವೊಂದು ಭಾಗ್ಯದೊಡಲೆಂದು  ಭಾವಿಸಲೇ ಬೇಕು. ಹಸುರಿನುಸಿರು ಬರುವುದೆಂಬ  ಕಾತರದ ನಿರೀಕ್ಷೆಯಲ್ಲಿರಬೇಕು  ಮುಕ್ತಿ ಮಾರ್ಗ...

ಬದುಕೆಂಬ ನಾವೆ - ಭಾವ

 

ಭಾವವೊಂದು ಬಾಳ ಬೆಳಗುತ 

ಗೀತೆಯೊಂದನು ಹಾಡಿತು 

ಬಯಲಿನೊಳಗೆ ವೀಣೆ ನುಡಿಸುತ 

ರಾಗವೊಂದು ಕೂಡಿತು 

ಶೃತಿಯೊಂದು ಗಾನ ಸೇರಿ 

ಬದುಕಿನಾಳವನ್ನು ಕಂಡಿತು 

ಎದೆಯಾಳವು ನೋವನೆಲ್ಲ ಮರೆತು

ಧ್ಯಾನದಾಳವನ್ನು ಮೂಡಿತು.

ಭಾವವೊಂದು ಬಾಳ ಬೆಳಗುತ.............

ಹೃದಯವನ್ನು ನಿರ್ದಯೆಯಿಂದ 

ನಿರಾಸೆಯಲ್ಲಿ ಮುಳುಗಿಸಿತ್ತು 

ಆಸರೆಯೊಂದಕೆ ಆತಂಕದ 

ಬಿರುಗಾಳಿಯೊಂದು ಅಪ್ಪಳಿಸಿತ್ತು 

ಜೀವನದಾಟದಲ್ಲಿ ಭಾವ ಬೃಂಗ 

ಹೂದೋಟವನ್ನು ಕಂಡು ನಗುತಲಿತ್ತು 

ಹೂವ ರಾಶಿಗಳಲ್ಲಿ 

ಸಂಗಾತಿಯನ್ನು ಕುರಿತು ಕಾತರಿಸಿತ್ತು.

ಭಾವವೊಂದು ಬಾಳ ಬೆಳಗುತ.............


ಭಾವವೊಂದು ಮನಸು ನೂರು

ಜಾರುತಿತ್ತು ಹೃದಯದಾಳದಿಂದ 

ಮನಸು ಮರ್ಕಟನೆಂಬುದನ್ನು 

ನಿಜವಾಗಿಸುವಲ್ಲಿ ತಿಳಿದೆನಂತರಾಳದಿಂದ 

ಹಕ್ಕಿಯಂತೆ ಹಾರುತಿಹುದು 

ಗೊತ್ತು ಗುರಿಯಿಲ್ಲದ ಕಡೆಗೆ ಅಬ್ಬರದಾಟದಿಂದ 

ಸ್ವಾಭಿಮಾನಿ ಮನುಜನಾಗಿ 

ಬದುಕನ್ನು ರೂಪಿಸುವ ಮಹದಾಸೆಯಿಂದ.

ಭಾವವೊಂದು ಬಾಳ ಬೆಳಗುತ............

ಭಾವಲಹರಿ ಎತ್ತ ಸಾಗುವುದೋ 

ಕಡಿವಾಣವಿಲ್ಲದ ಕುದುರೆಯ ತೆರದಲ್ಲಿ 

ಗಾನಲಹರಿ ಕೇಳುತಿತ್ತು 

ಕೊಂಚ ಲೀನನಾಗು ತರಂಗದಲ್ಲಿ

ಮೊಸಳೆಯೊಂದು ಮೋಸ ಮಾಡಲೆಂದು 

ಬಾಯಿ ತೆರೆದಿತ್ತು ತೀರದಲ್ಲಿ

ಎಂಥ ಮನಸು ಕನಸಿನಲ್ಲೆ 

ಕಂಡಿತಲ್ಲ ಕೆಡುಕ ಹೃದಯದಲ್ಲಿ.

ಭಾವವೊಂದು ಬಾಳ ಬೆಳಗುತ.............

ಭಾವಗೀತೆ ಹರಿಯುತಿತ್ತು 

ತನ್ನ ಪಾಡಿಗೆ ತಾನು 

ಗಾಳಿಯೊಡನೆ ಗಾನ ಕೇಳಿ 


ಸಂಭ್ರಮಿಸಿತಲ್ಲಿ ಭಾನು

ನೆಲೆಯ ಕಾಣದಂತೆ ಮನಸು 

ಕೆಸರಿನಲ್ಲಿ ಸಿಲುಕಿತೇನು 

ಕಮಲದ ಕಂಪಿನಲ್ಲಿ ಸವಿಯುತಿತ್ತು 

ಮಂದಸ್ಮಿತ ಮಧುರ ಸವಿಜೇನು.

ಭಾವವೊಂದು ಬಾಳ ಬೆಳಗುತ.............

ಒಲುಮೆಯೆಂಬ ಶಕ್ತಿ ತುಂಬಿ 

ಮನಸು ಹಾಡಿನಲ್ಲಿ ಮುಳುಗಿತು 

ಎದೆಯ ಭಾರ ಹಗುರವಾಗಿ 

ನಿಟ್ಟುಸಿರ ಬಿಟ್ಟು ತಾನು ಮಲಗಿತು 

ಸನಿಹಕೆ ಬಾರದೆಂದು ಭ್ರಮರವೊಂದು 

ಮನಸಿಗೆ ಶಾಪವನ್ನು ಹಾಕಿತು 

ಮನಸು ಮಾತ್ರ ಹರುಷದಿಂದ 

ತನ್ನೆದೆಯಾಳವನ್ನು ಹೊಕ್ಕಿತು.

ಭಾವವೊಂದು ಬಾಳ ಬೆಳಗುತ..............

**************************************

ಕಾಮೆಂಟ್‌ಗಳು